ಕೆಲವರಿರುತ್ತಾರೆ. ಅವರಿಗೆ ರಾಜಕಾರಣಿಗಳನ್ನು ತೆಗಳುವುದೆಂದರೆ ಎಲ್ಲಿಲ್ಲದ ಸಂತೋಷ. ರಾಜಕಾರಣಿಗಳೆಲ್ಲಾ ಭ್ರಷ್ಟರು , ಅಯೋಗ್ಯರು , ಪಾಪಿಗಳು... ಹೀಗೆ ಸಾಧ್ಯವಾದ ಎಲ್ಲ ಪದವಿಶೇಷಣಗಳನ್ನೂ ಉಪಯೋಗಿಸಿ ರಾಜಕಾರಣಿಗಳನ್ನು ಬಯ್ಯುತ್ತಾರೆ. ಅಂದಹಾಗೆ , ರಾಜಕಾರಣಿಗಳನ್ನು ಆ ಪಾಟಿ ಬಯ್ಯುವುದರಲ್ಲಿ ತಪ್ಪೇನೂ ಇಲ್ಲ ಬಿಡಿ. ನಮ್ಮ ರಾಜಕಾರಣಿಗಳು ಜನರಿಂದ ತೆಗಳಿಸಿಕೊಳ್ಳಲು ಯೋಗ್ಯರೇ. ಅದಲ್ಲದೆ , ಜನರಿಂದ ಹೇಲಿಸಿಕೊಳ್ಳದ ರಾಜಕಾರಣಿ ಜಗತ್ತಿನಲ್ಲಿ ಒಬ್ಬನೂ ಇರಲಿಕ್ಕಿಲ್ಲ. ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ತಮ್ಮ ಪಕ್ಷ ಉಳಿಸುವ ನೆಪ ಒಡ್ಡಿ ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಸರಕಾರ ರಚಿಸಿದಾಗ ಕರ್ನಾಟಕದಲ್ಲಿ ವಚನಭ್ರಷ್ಟತೆಯ ಬಗ್ಗೆ ಅಷ್ಟೇನೂ ಚರ್ಚೆಯಾಗಲಿಲ್ಲ. ಆದರೆ ಯಾವಾಗ ಇಪ್ಪತ್ತು ತಿಂಗಳ ತನ್ನ ಅವಧಿ ಮುಗಿದ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಕುಮಾರಸ್ವಾಮಿ ನಿರಾಕರಿಸಿದರೋ ಆವಾಗ ವಚನಭ್ರಷ್ಟತೆಯ ಬಗ್ಗೆ ನಾಡಿನಾದ್ಯಂತ ಚರ್ಚೆ ಆರಂಭವಾಯಿತು. ಅದರಲ್ಲೂ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದಿರಲು ಕುಮಾರಸ್ವಾಮಿ ನೀಡಿದ ಕಾರಣಗಳು ಜನರಲ್ಲಿ ಪ್ರಸ್ತುತ ರಾಜಕಾರಣದ ಬಗ್ಗೆ ಹೇಸಿಗೆ ಮೂಡಲು ಕಾರಣವಾಯಿತು. ಇವತ್ತು ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹ ಎನ್ನುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ದೇವರ ಕೆಲಸವೇ ಆಗಿರುವ ಸರಕಾರದ ಕೆಲಸದಲ್ಲಂತೂ ಭ್ರಷ್ಟತೆ ಎಂಬುದು ಸಾಂಸ್ಥಿಕ ರೂಪವನ್ನೇ ಪಡೆ...
ಆನೋ ಭದ್ರಾಃ ಕೃತವೋ ಯಂತು ವಿಶ್ವತ: