ಕನ್ನಡಿಗರ ಪಾಲಿಗೆ ಕುಂಟೆಗೋಡು ವಿಭೂತಿ ಸುಬ್ಬಣ್ಣ ಯಾವತ್ತಿಗೂ ಒಂದು ಅಚ್ಚರಿಯೇ ಸರಿ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ತಮ್ಮ ಸ್ನಾತಕೋತ್ತರ ಅಧ್ಯಯನ ಮುಗಿಸಿದ ಕೆ. ವಿ. ಸುಬ್ಬಣ್ಣ ಮನಸ್ಸು ಮಾಡಿದ್ದರೆ ನಾಡಿನ ಯಾವುದಾದರೂ ವಿಶ್ವವಿದ್ಯಾಲಯದ ಆಯಕಟ್ಟಿನ ಜಾಗವನ್ನು ಆಕ್ರಮಿಸಿ ಕೂರಬಹುದಿತ್ತು. ಬಹುಷ: ಅವರು ಹಾಗೆ ಮಾಡಿದ್ದರೆ ತಮ್ಮ ನಿವೃತ್ತಿಯ ಅಂಚಿಗೆ ಬರುವ ಹೊತ್ತಿಗೆ ಒಂದಿಷ್ಟು ವಿದೇಶ ಪ್ರವಾಸ, ಒಂದಿಷ್ಟು ಡಾಕ್ಟರೇಟ್ ಡಿಗ್ರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಿದ್ದರು. ಆದರೆ ಸುಬ್ಬಣ್ಣ ಹಾಗೆ ಮಾಡಲಿಲ್ಲ. ತಮ್ಮ ಊರಾದ ಹೆಗ್ಗೋಡಿಗೆ ವಾಪಸಾದ ಸುಬ್ಬಣ್ಣ ಅಲ್ಲಿಯೇ ನೀಲಕಂಠೇಶ್ವರ ನಾಟಕ ಸಂಘವನ್ನು ಕಟ್ಟಿದರು. ಬಹುಷ: ಜಾಗತಿಕ ರಂಗಭೂಮಿಯ ಯಾವ ಗಾಳಿಯೂ ಬೀಸದಿದ್ದ ಹೆಗ್ಗೋಡಿನಲ್ಲಿ ರಂಗಚಟುವಟಿಕೆಗಳನ್ನು ಆರಂಭಿಸಿದರು. ನೋಡನೋಡುತ್ತಿದ್ದ ಹಾಗೆ ನೀನಾಸಂ ಅನ್ನು ಜಗವೇ ಮೆಚ್ಚುವ ರೆಪರ್‍ಟರಿಯನ್ನಾಗಿಸಿದರು. ಕೆ ವಿ ಸುಬ್ಬಣ್ಣ ಕೇವಲ ವ್ಯಕ್ತಿಯಾಗುಳಿಯಲಿಲ್ಲ; ಈ ನಾಡಿನ ಪ್ರಜ್ಞೆಯಾಗಿ ಬೆಳೆದರು. ಕನ್ನಡ ರಂಗಭೂಮಿಯ ’ಗಾಂಧಿ’ಯಾದರು. *** ಕೈಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಬಳ ತರುವ ಕೆಲಸ ಬ್ಲಿಟ್ಜ್ ಪತ್ರಿಕೆಯಲ್ಲಿತ್ತು. ಕೆಲ ಕಾಲ ಆ ಕೆಲಸವನ್ನು ಮಾಡಿದ ಪಿ ಸಾಯಿನಾಥ್‌ಗೆ ಅದೇಕೋ ಇದ್ದಕ್ಕಿದ್ದಂತೆ ಆ ಕೆಲಸ ತಮಗೆ ಸರಿಹೊಂದುವುದಿಲ್ಲ ಅಂತ ಅನಿಸಿಬಿಟ್ಟಿತು. ಸರಿ, ತಮ್ಮ ಪೆನ್ನು, ಪುಸ್ತಕ ಹಿಡಿದು ಬ್ಯಾಗ್ ಹೆಗಲಿಗೇರಿಸಿ ಹೊರಟ ಸಾಯಿನ...
ಆನೋ ಭದ್ರಾಃ ಕೃತವೋ ಯಂತು ವಿಶ್ವತ: